ನೆಲಗಟ್ಟು -
ಸಿಮೆಂಟ್, ಡಾಂಬರು, ಕಡಿದ ಕಲ್ಲು, ಇಟ್ಟಿಗೆ, ಎರಕದ ಗಾಜು, ರಬ್ಬರ್, ಮರದ ತುಂಡು ಮುಂತಾದವುಗಳಿಂದ ನಿರ್ಮಿತವಾದ ವಾಹನಮಾರ್ಗ ಮತ್ತು ಪಾದಚಾರಿಗಳ ಮಾರ್ಗ. ನೆಲಗಟ್ಟನ್ನು ನಿರ್ಮಿಸುವ ವಿಧಾನ, ಅದರ ನಿರ್ಮಾಣಕ್ಕೆ ಬೇಕಾಗುವ ಸಾಮಗ್ರಿ, ಅದರ ದಪ್ಪ ಮುಂತಾದ ವಿವರಗಳು ಅದನ್ನು ಉಪಯೋಗಿಸುವ ವಾಹನಗಳ ಸಂಖ್ಯೆ, ತೂಕ ವೇಗ ಮತ್ತು ರಸ್ತೆಗಳ ಪ್ರಾಮುಖ್ಯ ಮುಂತಾದವನ್ನು ಅವಲಂಬಿಸುವುವು. ಅಲ್ಲದೆ ರಸ್ತೆಗಳು ಮಾರ್ಗದಲ್ಲಿನ ಮಣ್ಣು ಮತ್ತು ಸ್ಥಳೀಯ ವಾಯುಗುಣವನ್ನು ಸಹ ಅವಲಂಬಿಸುವುವು. ನೆಲಗಟ್ಟುಗಳ ನಿರ್ಮಾಣಕಾರ್ಯ ವಿಜ್ಞಾನ ಪ್ರಗತಿಯಾದಂತೆಲ್ಲ ಹೆಚ್ಚುಹೆಚ್ಚಾಗಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಹೆಚ್ಚಿನ ಪ್ರಮಾಣದಲ್ಲಿ ಯಂತ್ರಗಳ ಮತ್ತು ಇತರ ಆಧುನಿಕ ಸಲಕರಣೆಗಳ ಬಳಕೆಯಿಂದ ಆಗುತ್ತಿದೆ.		(ಎಚ್.ಕೆ.ಪಿ.)
(ಪರಿಷ್ಕರಣೆ: ಎಂ.ಜಿ.ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ